ಶ್ರೀಕೆ.ವಿ. ಮತ್ತುಪಂಚಗಿರಿಶಿಕ್ಷಣ ದತ್ತಿಯನ್ನು 1978ರಲ್ಲಿ ಸ್ಥಾಪಿಸಲ್ಪಟ್ಟಿದ್ದು, ಈ ಎರಡೂ ದತ್ತಿಗಳ ಸಂಸ್ಥಾಪಕ ಅಧ್ಯಕ್ಷರು ಹಾಗೂ ರಾಜಕೀಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ದೂರ ದೃಷ್ಠಿಯನ್ನು ಹೊಂದಿದಶ್ರೀ ಸಿ.ವಿ.ವೆಂಕರಾಯಯಪ್ಪನವರ ಪೂಜ್ಯ ತಂದೆಯವರಾದಂತಹ ಕರ್ನಕಂಟಿ ವೆಂಕಟಪತೆಪ್ಪನವರ ನೆನಪಿಗಾಗಿ ಸ್ಥಾಪಿಸಲಾಯಿತು. ಶ್ರೀ ಸಿ.ವಿ.ವೆಂಕಟರಾಯುಪ್ಪನವರ ಕಠಿಣ ಪರಿಶ್ರಮ ಮತ್ತು ಸೇವಾ ಮನೋಭಾವದಿಂದ ಇಂದು ಚಿಕ್ಕಬಳ್ಳಾಪುರ ನಗರವು ಅತ್ಯುತ್ತಮ ಶೈಕ್ಷಣಿಕ ಕೇಂದ್ರವಾಗಿ ಮಾರ್ಪಟ್ಟಿದ್ದು, ಈ ಎರಡೂ ದತ್ತಿಗಳ ಅಡಿಯಲ್ಲಿ ಈ ಕೆಳಗಿನ ವಿದ್ಯಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ.
ಶ್ರೀಕೆ.ವಿ.ಶಿಕ್ಷಣ ಮಹಾವಿದ್ಯಾಲಯ,(ಅನುದಾನಿತ)
ಕೆ.ವಿ.ಟಿಪಾಲಿಟೆಕ್ನಿಕ್ (ಅನುದಾನಿತ),
ಶ್ರೀಕೆ.ವಿ.ಕಾಲೇಜ್ಆಫ್ಫಾರ್ಮಸಿ,
ಸರ್ಎಮ್.ವಿ .ಇಂಡಸ್ಟ್ರಿಯಲ್ಟ್ರೈನಿಂಗ್ಸೆಂಟರ್, (ಅನುದಾನಿತ)
ಶ್ರೀ ಕೆ.ವಿ. ದೈಹಿಕಶಿಕ್ಷಣಕಾಲೇಜು,
ಶ್ರೀಕೆ.ವಿ.ICSE ಪಠ್ಯಕ್ರಮದಆಂಗ್ಲಶಾಲೆ
ಪಂಚಗಿರಿಬೋಧನಾ ಪ್ರೌಢಶಾಲೆ, (ಅನುದಾನಿತ)
ಪಂಚಗಿರಿ ಬೋಧನಾಹಿರಿಯ ಪ್ರಾಥಮಿಕ ಶಾಲೆ,
ಶ್ರೀಕೆ.ವಿ.ಆಂಗ್ಲಶಾಲೆ (ಕೋಟೆ),
ಶ್ರೀವೆಂಕಟನರಸಮ್ಮಗುರುಕುಲಾಶ್ರಮ,
ಶ್ರೀಕೆ.ವಿ.ಟಿ. ಬಾಲಕರ ಮತ್ತು ಬಾಲಕಿಯರ ವಸತಿಗೃಹಗಳು,
ಶ್ರೀಕೆ.ವಿ.ಟಿ.ಎಸ್ಟೇಟ್,
ಶ್ರೀಪಂಚಗಿರಿಪದವಿ ಪೂರ್ವಕಾಲೇಜು,
ಶ್ರೀ.ಕೆ.ವಿ.ಕನ್ನಡ ಹಿರಿಯ ಪ್ರಾಥಮಿಕ ಶಾಲೆ,
ವಿದ್ಯಾ ಸಂಸ್ಥೆಗಳು ಸರಿ ಸುಮಾರು 110 ಎಕರೆ ಭೂಪ್ರದೇಶದಲ್ಲಿ ವಿಶಾಲವಾದಸೌಂದರ್ಯಯುತವಾದ ಮತ್ತು ಸ್ವಚ್ಚ ಪರಿಸರ ದಿಂದ ಕೂಡಿದ ವಾತಾವರಣದಲ್ಲಿ ಸ್ಥಾಪಿಸಲ್ಪಟ್ಟಿದೆ.
ಶ್ರೀ ಕೆ.ವಿ ಮತ್ತು ಪಂಚಗಿರಿ ವಿದ್ಯಾದತ್ತಿಗಳ ಸಂಸ್ಥಾಪಕ ಅಧ್ಯಕ್ಷರಾದ ದಿವಂಗತ ಶ್ರೀ ಸಿ.ವಿ.ವೆಂಕಟರಾಯಪ್ಪನವರ ಕಠಿಣ ಪರಿಶ್ರಮ ಮತ್ತು ಸೇವಾ ಮನೋಭಾವದಿಂದ ಇಂದು ಚಿಕ್ಕಬಳ್ಳಾಪುರ ನಗರವು ಅತ್ಯುತ್ತಮ ಶೈಕ್ಷಣಿಕ ಕೇಂದ್ರವಾಗಿ ಮಾರ್ಪಟ್ಟಿತು.
ಶ್ರೀಮತಿ ಸಿ.ವಿ.ಕಮಲಮ್ಮನವರು ಶ್ರೀ ಸಿ.ವಿ.ವೆಂಕಟರಾಯಪ್ಪನವರ ಧರ್ಮಪತ್ನಿಯವರಾಗಿದ್ದು, ದತ್ತಿಯ ಎಲ್ಲಾ ಕಾರ್ಯ, ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಪ್ರಧಾನ ಪೋಷಕರಾಗಿ ಸೇವೆಯನ್ನು ಸಲ್ಲಿಸಿರುತ್ತಾರೆ.
ಶಿಕ್ಷಣ ಮತ್ತು ರಾಜಕೀಯ ಎರಡೂ ಕ್ಷೇತ್ರಗಳಲ್ಲಿ ದೂರ ದರ್ಷಿತ್ವ ಹಾಗೂ ಸಮರ್ಪಣಾ ಮನೋಭಾವದ ವ್ಯಕ್ತಿತ್ವವನ್ನು ಹೊಂದಿರುವ ಶ್ರೀಕೆ.ವಿ.ನವೀನ್ ಕಿರಣ್ ರವರು ಶ್ರೀ ಕೆ.ವಿ. ಮತ್ತು ಪಂಚಗಿರಿ ವಿದ್ಯಾ ದತ್ತಿಯಅಧ್ಯಕ್ಷರಾಗಿದ್ದು, ಎರಡೂ ದತ್ತಿಯ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೋಡಗಿಸಿಕೊಂಡಿದ್ದು , ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಸಿ.ವಿ. ವೆಂಕಟರಾಯಪ್ಪನವರ ಕನಸುಗಳನ್ನು ಸಕಾರಗೊಳಿಸುವಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ.
ಡಾ. ಸಾಯಿಪ್ರಭು ರವರು ವೃತ್ತಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಶ್ರೀಕೆ.ವಿಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಆಡಳಿತಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಕೆ.ವಿ. ಮತ್ತು ಪಿ.ಇ. ವಿದ್ಯಾ ಕ್ಷೇತ್ರದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದು, ದತ್ತಿಯ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿದ್ದಾರೆ.